Tuesday, January 29, 2019

                ಪ್ರಮುಖ ಮಿಶ್ರಲೋಹಗಳು
1. ತಾಮ್ರದ ಮಿಶ್ರಲೋಹಗಳು
ಎ. ಕಂಚು – ತಾಮ್ರ ಮತ್ತು ತವರ
ಉಪಯೋಗಗಳು- ವಿಗ್ರಹಗಳು, ಗಂಟೆಗಳು, ಪದಕಗಳು, ನಾಣ್ಯಗಳು, ಪಾತ್ರೆಗಳು ಮುಂತಾದವುಗಳ ತಯಾರಿಕೆಯಲ್ಲಿ ಬಳಸುತ್ತಾರೆ,.
ಬಿ. ಹಿತ್ತಾಳೆ – ತಾಮ್ರ ಮತ್ತು ಸತು
ಪಾತ್ರೆಗಳು, ವಿದ್ಯುತ್ ಉಪಕರಣಗಳು, ಯಂತ್ರಭಾಗಗಳು ಮುಂತಾದವುಗಳಲ್ಲಿ ಬಳಸುತ್ತಾರೆ.
ಸಿ. ಜರ್ಮನ್ ಸಿಲ್ವರ್ – ತಾಮ್ರ, ಸತು ಮತ್ತು ನಿಕ್ಕಲ್
ಉಪಯೋಗಗಳು – ಪಾತ್ರೆಗಳು, ರೋಧ ಸುರುಳಿಗಳು, ಅಲಂಕಾರಿಕ ಸಾಧನಗಳು
ಡಿ. ಗನ್ ಮೆಟಲ್ – ತಾಮ್ರ, ತವರ ಮತ್ತು ಸತು
ಉಪಯೋಗಗಳು – ಬಂದೂಕಿನ ಬ್ಯಾರೆಲ್‍ಗಳು, ಗಿಯರ್‍ಗಳು, ಎರಕಗಳು
2. ಕಬ್ಬಿಣದ ಮಿಶ್ರಲೋಹಗಳು
1. ನಿಕ್ಕಲ್ ಉಕ್ಕು – ಕಬ್ಬಿಣ ಮತ್ತು ನಿಕ್ಕಲ್
ಉಪಯೋಗಗಳು – ಪಾತ್ರೆಗಳು, ಕೊರೆಯುವ ಸಾಧನಗಳು
2. ಸ್ಟೀನ್‍ಲೆಸ್‍ಸ್ಟೀಲ್ ( ಕಲೆರಹಿತ ಉಕ್ಕು)– ಕ್ರೋಮಿಯಂ ಮತ್ತು ಕಬ್ಬಿಣ, ಕಾರ್ಬನ್, ನಿಕ್ಕಲ್
ಉಪಯೋಗಗಳು – ಪಾತ್ರೆಗಳು, ಶಸ್ತ್ರಕ್ರಿಯಾ ಉಪಕರಣಗಳು
4. ಆಲ್ನಿಕೊ – ಕಬ್ಬಿಣ, ನಿಕ್ಕಲ್, ಅಲ್ಯುಮಿನಿಯಂ, ಕೋಬಾಲ್ಟ್
ಉಪಯೋಗಗಳು – ಕಾಂತಗಳು
5. ನೈಕ್ರೋಮ್ – ಕಬ್ಬಿಣ, ನಿಕ್ಕಲ್ ಮತ್ತು ಕ್ರೋಮಿಯಂ
ಉಪಯೋಗಗಳು – ಉಷ್ಣೋತ್ಪನ್ನ , ಕಾಯಿಲ್‍ಗಳು
6. ಉಕ್ಕು – ಕಬ್ಬಿಣ ಮತ್ತು ಕಾರ್ಬನ್
ಉಪಯೋಗಗಳು – ಪೈಪುಗಳು, ಮೋಳೆ, ಶೀಟುಗಳು,
7. ಇನ್‍ವಾರ್ ಉಕ್ಕು – ಕಬ್ಬಿಣ, ನಿಕ್ಕಲ್, ಮತ್ತು ಕಾರ್ಬನ್
ಉಪಯೋಗಗಳು – ಲೋಲಕಗಳು

ಅಲ್ಯುಮಿನಿಯಂ ಮಿಶ್ರಲೋಹಗಳು :
1. ಆಲ್ನೀಕೊ – ಅಲ್ಯುಮಿನಿಯಂ, ನಿಕ್ಕಲ್, ಕೋಬಾಲ್ಟ್ , ಕಬ್ಬಿಣ
ಉಪಯೋಗಗಳು – ಆಯಸ್ಕಾ೦ತ ಗಳ ತಯಾರಿಕೆ

2. ಡ್ಯೂರಲ್ಯುಮಿನ್ – ಅಲ್ಯುಮಿನಿಯಂ, ತಾಮ್ರ , ಮೆಗ್ನೇಷಿಯಂ, ಮ್ಯಾಂಗನೀಸ್
ಉಪಯೋಗಗಳು – ವಿಮಾನಗಳು , ಅಡಿಉಗೆ ಪಾತ್ರೆಗಳು

3. ಮೆಗ್ನಾಲಿಯಂ – ಅಲ್ಯುಮಿನಿಯಂ, ಮೆಗ್ನೀಷಿಯಂ
ಉಪಯೋಗಗಳು – ವಿಮಾನದ ಕವಚ
                         ಲೋಹಗಳ ಅಧ್ಯಯನ
• ಧಾತುಗಳನ್ನು ಲೋಹಗಳು ಮತ್ತು ಅಲೋಹಗಳೆಂಬ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ.
• ಲೋಹಗಳು ಸಾಮಾನ್ಯ ತಾಪದಲ್ಲಿ ಬಹುತೇಕವು ಘನ ರೂಪದಲ್ಲಿದೆ. ಆದರೆ ‘ಪಾದರಸ’ ಮತ್ತು ‘ಗ್ಯಾಲಿಯಂ’ಗಳು ದ್ರವ ರೂಪದಲ್ಲಿರುವ ಲೋಹಗಳಾಗಿವೆ.
• ಲೋಹಗಳೆಲ್ಲವೂ ಉತ್ತಮ ಉಷ್ಣ ಮತ್ತು ವಿದ್ಯುತ್‍ವಾಹಕಗಳು.
• ಇವು ಎಲೆಕ್ಟ್ರಾನ್‍ಗಳನ್ನು ಬಿಟ್ಟುಕೊಡುವ ಗುಣವುಳ್ಳ ಧಾತುಗಳಾಗಿವೆ.
• ಲೋಹಗಳ ಬಹುಮುಖ್ಯ ಆಕರ ಭೂಗರ್ಭ. ಇದರಲ್ಲಿ ಲೋಹವು ಶುದ್ಧರೂಪದಲ್ಲೂ, ಸಂಯುಕ್ತ ರೂಪದಲ್ಲೂ ದೊರೆಯುತ್ತದೆ.
• ಲೋಹಗಳು ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿವೆ.
• ಪ್ರಮುಖ ಲೋಹಗಳು- ತಾಮ್ರ, ಕಬ್ಬಿಣ, ಚಿನ್ನ, ಬೆಳ್ಳಿ, ಪಾದರಸ, ಸತು, ಪ್ಲಾಟಿನಂ, ಅಲ್ಯುಮಿನಿಯಂ, ಹಿತ್ತಾಳೆ, ಮೆಗ್ನೀಷಿಯಂ,ಉಕ್ಕು,ಕ್ಯಾಲ್ಸಿಯಂ, ಪೊಟ್ಯಾಷಿಯಂ, ಸೊಡಿಯಂ , ಕಂಚು

• ಲೋಹಗಳ ರಾಸಾಯನಿಕ ಗುಣಗಳು :
1. ಲೋಹಗಳು ಗಾಳಿಯೊಂದಿಗೆ ( ಆಮ್ಲಜನಕ) ವರ್ತಿಸಿ ಆಯಾ ಲೋಹಗಳ ಆಕ್ಸೈಡ್‍ಗಳಾಗುತ್ತವೆ. ಉದಾ- ಸೋಡಿಯಂ ಲೋಹವು ಗಾಳಿಯೊಂದಿಗೆ ವರ್ತಿಸಿ, ಸೋಡಿಯಂ ಆಕ್ಸೈಡ್ ಉಂಟಾಗುತ್ತದೆ.
2. ಲೋಹಗಳು ಸಾಮಾನ್ಯವಾಗಿ ನೀರಿನೊಂದಿಗೆ ವರ್ತಿಸಿ ಹೈಡ್ರೋಜನ್ ಬಿಡುಗಡೆ ಮಾಡುತ್ತವೆ. ಮತ್ತು ಆಯಾ ಲೋಹಗಳ ‘ಆಕ್ಸೈಡ್’ ಗಳಾಗುತ್ತವೆ.ಉದಾ – ಕಬ್ಬಿಣವು ನೀರಿನೊಂದಿಗೆ ವರ್ತಿಸಿ, ಕಬ್ಬಿಣದ ಆಕ್ಸೈಡ್ ಆಗುತ್ತದೆ.
3. ಲೋಹಗಳು ಹೈಡ್ರೋಕ್ಲೋರಿಕ್ ಆಮ್ಲದೊಂದಿಗೆ ವರ್ತಿಸಿದಾಗ ಆಯಾ ಲೋಹಗಳ ‘ಕ್ಲೋರೈಡ್’ ಗಳು ಉಂಟಾಗುತ್ತವೆ.ಉದಾ –ಮೆಗ್ನಿಷಿಯಂ ಜೊತೆ ದುರ್ಬಲ ಹೈಡ್ರೋಕ್ಲೋರಿಕ್ ಆಮ್ಲ ವರ್ತಿಸಿ ಮೇಗ್ನಿಷಿಯಂ ಕ್ಲೋರೈಡ್ ಬಿಡುಗಡೆಯಾಗುತ್ತದೆ.
4. ಲೋಹಗಳು ಹೈಡ್ರೋಜನ್‍ನೊಂದಿಗೆ ವರ್ತಿಸಿ, ‘ಹೈಡ್ರೇಡ್‍ಗಳನ್ನು ಕೊಡುತ್ತವೆ.
5. ಲೋಹಗಳು ಸಲ್ಪುರಿಕ್ ಆಮ್ಲ(ಗಂಧಕ)ದೊಂದಿಗೆ ವರ್ತಿಸಿದಾಗ ‘ಸಲ್ಪೈಡ್‍ಗಳು’( ಸಲ್ಪೇಟು) ಉಂಟಾಗುತ್ತದೆ. ಉದಾ –ಕಬ್ಬಿಣವು ಗಂಧಕದೊಂದಿಗೆ ವರ್ತಿಸಿ ಕಬ್ಬಿಣದ ಸಲ್ಪೇಡ್ ಉತ್ಪತ್ತಿಯಾಗುತ್ತದೆ.
6. ದುರ್ಬಲ ನೈಟ್ರಿಕ್ ಆಮ್ಲದೊಂದಿಗೆ ಲೋಹಗಳು ಪ್ರತಿವರ್ತಿಸಿ ಹೈಡ್ರೋಜನ್ ಕೊಡುವುದರೊಂದಿಗೆ ಆಯಾ ನೈಟ್ರೇಟುಗಳಾಗುತ್ತದೆ. ಉದಾ –ತಾಮ್ರವು ನೈಟ್ರಿಕ್ ಆಮ್ಲದೊಂದಿಗೆ ವರ್ತಿಸಿ, ತಾಮ್ರದ ನೈಟ್ರೇಟ್‍ಗಳಾಗುತ್ತವೆ.
7. ಸಾಮಾನ್ಯವಾಗಿ ಲೋಹಗಳು ದುರ್ಬಲ ಆಮ್ಲಗಳಿಂದ ಹೈಡ್ರೋಜನನ್ನು ಸ್ಥಾನಾಂತರಿಸುತ್ತವೆ.

#• ಅತ್ಯಂತ ಹಗುರ ಲೋಹ – ಲಿಥಿಯಂ
#• ದುರ್ಬಲ ನೈಟ್ರಿಕ್ ಆಮ್ಲದೊಂದಿಗೆ ವರ್ತಿಸದೆ ಇರುವ ಲೋಹ – ಕಬ್ಬಿಣ
#• ಗಾಳಿಯೊಂದಗೆ ವರ್ತಿಸದೆ ಇರುವ ಲೋಹಗಳು – ಚಿನ್ನ ಮತ್ತು ಪ್ಲಾಟಿನಂ
#• ಯಾವ ಲೋಹವನ್ನು ಕ್ಲೋರಿನ್ ತುಂಬಿರುವ ಜಾಡಿಯಲ್ಲಿ ಹಾಕಿದಾಗ ಕಿಡಿಗಳು ಕಂಡುಬರುತ್ತವೆ. – ಅಲ್ಯುಮಿನಿಯಂ
#• ಲೋಹಗಳನ್ನು ತಂತಿಗಳಾನ್ನಾಗಿ ಮಾಡುವ ಗುಣ – ತನ್ಯ( ತಾಂತವತೆ)
#• ಲೋಹಗಳನ್ನು ತಗಡುಗಳಾನ್ನಾಗಿ ಮಾಡುವ ಗುಣ – ಕುಟ್ಯ ( ಪತ್ರಶೀಲತ್ವ)
#• ಲೋಹಗಳನ್ನು ‘ಉತ್ಕರ್ಷಣಕಾರಿಯಾಗಿ’ ಬಳಸಲಾಗುತ್ತದೆ.
#• ಲೋಹಗಳು ಸಾಮಾನ್ಯವಾಗಿ ಕಠಿಣವಾಗಿದ್ದು, ಹೊಳೆಯುತ್ತವೆ, ಮತ್ತು ಉನ್ನತ ದ್ರವನಬಿಂದು ಹೊಂದಿದೆ.

# ಖನಿಜಗಳು ಮತ್ತು ಅದಿರುಗಳು :
*ನೈಸರ್ಗಿಕವಾಗಿ ದೊರೆಯುವ ಲೋಹಿಯ ಮಿಶ್ರಣಗಳೆ ಖನಿಜಗಳು. ಖನಿಜಗಳಲ್ಲಿ ಲೋಹಗಳು ಸ್ವತಂತ್ರ ರೂಪದಲ್ಲೋ, ಸಂಯುಕ್ತ ರೂಪದಲ್ಲೋ ಇರುತ್ತವೆ. ಇವುಗಳ ಜೊತೆಗೆ ಮಣ್ಣು, ಸಿಲಿಕಾ( ಮರಳು) ಮುಂತಾದ ಅನುಪಯುಕ್ತ ವಸ್ತುಗಳು ಸೇರಿರುತ್ತವೆ.
*ಯಾವ ಖನಿಜದಿಂದ ಅದರಲ್ಲಿರುವ ಲೋಹವನ್ನು ಸುಲಭ ವಿಧಾನದಿಂದ ಉದ್ದರಿಸಬಹುದೋ ಅಂತಹ ಖನಿಜವನ್ನು ಆ ಲೋಹದ ‘ಅದಿರು’ ಎನ್ನುವರು.
*ಅದಿರುಗಳೆಲ್ಲವೂ ಖನಿಜಗಳೇ, ಆದರೆ ಖನಿಜಗಳೆಲ್ಲವೂ ಅದಿರುಗಳಲ್ಲ.
• ಕೆಲವು ಪ್ರಮುಖ ಲೋಹಗಳ ಅದುರುಗಳು
* ಸೋಡಿಯಂ – ರಾಕ್‍ಸಾಲ್ಟ್
* ಅಲ್ಯುಮಿನಿಯಂ – ಬಾಕ್ಸೈಟ್
* ಕಬ್ಬಿಣ – ಹೆಮಟೈಟ್, ಮೆಗ್ನಟೈಟ್
* ತಾಮ್ರ –ಚಾಲ್ಕೋಪೈಟೈಟ್ಸ್
* ಮ್ಯಾಂಗನೀಸ್ – ಪೈರೊಲುಸೈಟ್
* ಕ್ಯಾಲ್ಸಿಯಂ – ಸುಣ್ಣದಕಲ್ಲು
* ಕ್ರೋಮಿಯಂ – ಕ್ರೋಮೈಟ್
* ಪಾದರಸ – ಸಿನ್ನಬಾರ್

• ಲೋಹಗಳನ್ನು ಅವುಗಳ ಅದುರಿನಿಂದ ಉದ್ದರಿಸಿ ಅವುಗಳನ್ನು ಶುದ್ದೀಕರಿಸುವ ತಂತ್ರಜ್ಞಾನ – ಲೋಹೋದ್ಧರಣ ಅಥವಾ ಲೋಹವಿದ್ಯೆ (ಮೆಟಲರ್ಜಿ)

# ಲೋಹೋದ್ಧರಣದ ಪ್ರಮುಖ ಹಂತಗಳು :
1. ಅದಿರಿನ ಸಾರವರ್ಧನೆ
ಅದಿರಿನ ಜೊತೆ ಇರಬಹುದಾದ ಭೌಮಿಕ ಕಶ್ಮಲಗಳಾದ ಕಲ್ಲು, ಮಣ್ಣು, ಸಿಲಿಕಾ( ಮರಳು) ಮುಂತಾದವುಗಳನ್ನು ಬೇರ್ಪಡಿಸುವ ಹಂತವನ್ನು ಅದಿರಿನ ಸಾರವರ್ಧನೆ ಎನ್ನುವರು.
ಅದಿರಿನ ಸಾರವರ್ದನೆಯ ವಿಧಾನಗಳು
ಎ. ಗುರುತ್ವ ವಿಧಾನ
ಭೌಮಿಕ ಪದಾರ್ಥಗಳು ಲೋಹಿಯ ಸಂಯುಕ್ತಕ್ಕಿಂತ ಹಗುರವಾಗಿದ್ದರೆ ಈ ವಿಧಾನದಿಂದ ಅದಿರನ್ನು ಸಾರವರ್ಧಿಸುತ್ತಾರೆ. ಉದಾ: ಚಿನ್ನ

ಬಿ. ಬುರುಗುಪ್ಲವನ ವಿಧಾನ
ಈ ವಿಧಾನದಲ್ಲಿ ಸಲ್ಪೈಟ್ ಅದಿರನ್ನು ಸಾರವರ್ಧಿಸುತ್ತಾರೆ. ಬುರುಗು ಪ್ಲವನ ವಿಧಾನದಲ್ಲಿ ಪುಡಿಮಾಡಿದ ಸಲ್ಪೈಡ್ ಅದುರಿಗೆ ನೀರು ಮತ್ತು ಪೈನ್ ಎಣ್ಣೆ ಇವುಗಳನ್ನು ಸೇರಿಸುತ್ತಾರೆ.
ಉದಾಹರಣೆ – ತಾಮ್ರ ಅದಿರು ಪೈರೇಟ್ಸ್

ಸಿ. ಕಾಂತೀಯ ವಿಧಾನ
ಲೋಹಯುಕ್ತ ಅದಿರಿನ ಕಣಗಳಾಗಲೀ, ಖನಿಜ ಕಲ್ಮಷ ಕಣಗಳಾಗಲೀ ಕಾಂತೀಯವಾಗಿದ್ದರೆ, ಅವುಗಳನ್ನು ಕಾಂತೀಯ ವಿಧಾನದಿಂದ ಸಾರವರ್ಧಿಸುತ್ತಾರೆ. ಉದಾ : ಕಬ್ಬಿಣದ ಮ್ಯಾಗ್ನಟೈಟ್ ಅದಿರನ್ನು ಈ ವಿಧಾನದಲ್ಲಿ ಸಾರವರ್ಧಿಸುತ್ತಾರೆ.
ಡಿ. ಜಲಕ್ಷಾಲನ
ಈ ವಿಧಾನವು ಹೆಚ್ಚು ಕಡಿಮೆ ಗುರುತ್ವ ವಿಧಾನವನ್ನೇ ಹೋಲುತ್ತದೆ.
ಉದಾ : ಈ ವಿಧಾನದಲ್ಲಿ ಕಬ್ಬಿಣದ ಹೆಮಟೈಟ್ ಅದಿರನ್ನು ಸಾರವರ್ಧಿಸುತ್ತಾರೆ.

# 2. ಕ್ಯಾಲ್ಸಿನಿಕರಣ
ಸಾರವರ್ಧಿಸಿದ ಅದಿರನ್ನು ಕುಲುಮೆಯಲ್ಲಿ ಗಾಳಿಯ ಸಂಪರ್ಕವಿಲ್ಲದೆ ಅಥವಾ ಮಿತ ಪ್ರಮಾಣ ಗಾಳಿಯ ಸಂಪರ್ಕದಲ್ಲಿ ಅದಿರಿನ ದ್ರವನ ಬಿಂದೂವಿಗಿಂತಲೂ ಕಡಿಮೆ ತಾಪದಲ್ಲಿ ಕಾಯಿಸುವ ವಿಧಾನವೇ ಕ್ಯಾಲ್ಸಿನೀಕರಣ. ಈ ವಿಧಾನದಲ್ಲಿ ಆವಿಶೀಲ ವಸ್ತುಗಳು ಆವಿಯಾಗಿ ಹೊರಬೀಳುವುವು ಮತ್ತು ತೇವಾಂಶ ಮತ್ತು ಸ್ಪಟಿಕ ಜಲಗಳು ನಿವಾರಣೆಯಾಗುವುವು.

# 3. ಪ್ರದ್ರವೀಕರಣ
ಈ ಹಂತವು ರಾಸಾಯನಿಕವಾಗಿ ಅಪಕರ್ಷಕ ಕ್ರಿಯೆಯನ್ನು ಒಳಗೊಂಡಿರುತ್ತದೆ.( ಅಪಕರ್ಷಣೆ ಎಂದರೆ ಆಮ್ಲಜನಕವನ್ನು ಹೀರಿಕೊಳ್ಳುವುದು ಅಥೌಆ ಹೊರತೆಗೆಯುವುದು).
ಕ್ಯಾಲ್ಸೀನಿಕರಿಸಿದ ಅದಿರನ್ನು ಸೂಕ್ತವಾದ ಅಪಕರ್ಷದೊಡನೆ ಮಿಶ್ರಣ ಮಾಡಿ ಕುಲುಮೆಯಲ್ಲಿ ಕಾಯಿಸುವರು. ಅಪಕರ್ಷಕವು ಅದಿರಿನಲ್ಲಿರುವ ಲೋಹವನ್ನು ಅಪಕರ್ಷಿಸಿ ಲೋಹವನ್ನು ಕೊಡುವುದು.
ಸಾಮಾನ್ಯವಾಗಿ ‘ಕೋಕ್‍ನ್ನು’ ಅಪಕರ್ಷಕವಾಗಿ ಬಳಸುವರು.

#4. ಲೋಹದ ಶುಧ್ಧೀಕರಣ : ಇದರಲ್ಲಿ ಮೂರು ವಿಧಾನಗಳಿವೆ.
1. ದ್ರವನ ವಿಧಾನ
ಲೋಹದ ದ್ರವನ ಬಿಂದುವು ಅಶುಧ್ದತೆಗಳ ದ್ರವನ ಬಿಂದುಗಿಂತಲೂ ಕಡಿಮೆ ಇದ್ದಾಗ ಈ ವಿಧಾನ ಸೂಕ್ತವಾಗಿದೆ. ಉದಾ – ಸೀಸ ಮತ್ತು ತವರ

2. ವಿದ್ಯುತ್ ಶುದ್ಧೀಕರಣ
ಈ ವಿಧಾನದಿಂದ ಅತಿ ಶುದ್ಧವಾದ ಲೋಹವನ್ನು ಪಡೆಯಬಹುದು. ಉದಾ – ತಾಮ್ರದ ಶುದ್ಧೀಕರಣ
3. ಝೋನ್ ಶುಧ್ಧೀಕರಣ
ಅಶುದ್ಧ ಲೋಹವನ್ನು ಸರಳಿನ ರೂಪದಲ್ಲಿ ತೆಗೆದುಕೊಳ್ಳಬೇಕು. ಅದರ ಕೊನೆಯ ಭಾಗದ ಸುತ್ತಲೂ ಸರಿದಾಡಬಲ್ಲ ವಿದ್ಯುತ್ ಸುರುಳಿಯನ್ನು ಜೋಡಿಸಬೇಕು. ಸುರುಳಿಯಲ್ಲಿ ವಿದ್ಯುತ್ ಹಾಯಿಸಿ ಕಾಯಿಸಬೇಕು. ಹೀಗೆ ಮಾಡಿದಾಗ ಸರಳಿನಲ್ಲಿರುವ ಅಶುದ್ಧತೆಗಳು ಕಾಯುವ ಭಾಗದಿಂದ ತಣ್ಣಗಿರುವ ಭಾಗದ ಕಡೆಗೆ ಚಲಿಸುತ್ತವೆ. ಕೊನೆಯಲ್ಲಿ ಅಶುಧ್ಧತೆಗಳ ಸಂಗ್ರಹವಾಘಿರುವ ಆ ತುದಿಯನ್ನು ಕತ್ತರಿಸಿದರೆ, ಉಳಿದ ಭಾಗ ಶುದ್ಧ ಲೋಹದಿಂದ ಕೂಡಿರುತ್ತದೆ. ಉದಾ; ಸಿಲಿಕಾನ್ ಮತ್ತು ಜರ್ಮೆನಿಯಂ ಲೋಹಗಳನ್ನು ಈ ವಿಧಾನದಿಂದ ಶುದ್ಧೀಕರಿಸುವರು.

#  ಮಿಶ್ರಲೋಹಗಳು :
ಲೋಹ -ಲೋಹಗಳ ಅಥವಾ ಲೋಹ –ಅಲೋಹಗಳ ಸಮರೂಪ ಮಿಶ್ರಣವೇ ಮಿಶ್ರಲೋಹ.
ಮಿಶ್ರಲೋಹಗಳನ್ನು “ಘನದ್ರಾವಣ” ಎನ್ನುತ್ತಾರೆ.
*ಮಿಶ್ರಲೋಹಗಳಿಗೆ ವಿಶೇಷ ಗುಣಗಳು ಇರುವುದರಿಂದ ಅದನ್ನು ವ್ಯಾಪಕವಾಗಿ ಉಪಯೋಗಿಸುತ್ತಾರೆ.

Tuesday, January 22, 2019

ಕಾಂತತ್ವ

ಕಾಂತತ್ವ
ಕಾಂತ ಎಂದರೆ ಆಕರ್ಷಿಸುವುದು ಎಂದರ್ಥ ಕಾಂತ ಅವಿಷ್ಕಾರಕ್ಕೆ ಕಾರಣವಾದದ್ದು ಅದರ ಆಕರ್ಷಣೀಯ ಗುಣವಾಗಿದೆ.
ಕಾಂತದ ಅವಿಷ್ಕಾರ ಏಷ್ಯಾ ಖಂಡದಲ್ಲಿ ಮಗ್ನೆಸಿಯ ಎಂಬ ಊರಲ್ಲಿ  ಮಗ್ನೆಸಿಯ ವೆಂಬ   ಕುರಿ ಕಾಯುವ ವ್ಯಕ್ತಿಯಿಂದ ಆವಿಷ್ಕಾರವಾಯಿತು.
ಅಯಸ್ಕಾಂತ ಕಬ್ಬಿಣವನ್ನು ಆಕರ್ಷಿಸುವ ವಸ್ತುವಿಗೆ ಅಯಸ್ಕಾಂತ ಎನ್ನುವರು ಇಲ್ಲಿ ಆಯಸ್ ಎಂದರೆ ಕಬ್ಬಿಣದ ಎಂದರೆ ಆಕರ್ಷಿಸುವುದು ಎಂದರ್ಥವಾಗುತ್ತದೆ.

ಕಾಂತದ ವಿಧಗಳು
 1.ನೈಸರ್ಗಿಕ ಕಾಂತ  2.ಕೃತಕ ಕಾಂತ
1.ನೈಸರ್ಗಿಕ ಕಾಂತ
ನೈಸರ್ಗಿಕ ಕಾಂತ ಸ್ವಾಭಾವಿಕವಾಗಿ ಸಿಗುವ ಕಾಂತಿಯ ಗುಣವನ್ನು ಹೊಂದಿರುವ ಮ್ಯಾಗ್ನೆಟ್ ಎಂಬ ಕಬ್ಬಿಣದ ಅದಿರಿಗೆ ನೈಸರ್ಗಿಕ ಕಾಂತಗಳು ಎನ್ನುವರು.
ಉದಾ: ಹೆಮಟೈಟ್ ಮ್ಯಾಗ್ನಟೈಟ್ ಸೈಡರ್ ಲಿಮೇಲೈಟ್.

 ನೈಸರ್ಗಿಕ ಕಾಂತ ಗಳಿಗೆ ನಿರ್ದಿಷ್ಟ ಆಕಾರ ಇರುವುದಿಲ್ಲ  ಅವುಗಳಲ್ಲಿ ಕಾಂತಿಯ ಗುಣ ದುರ್ಬಲವಾಗಿರುತ್ತದೆ.
  2.ಕೃತಕ ಕಾಂತ
ಕೃತಕ ಕಾಂತಗಳು ಕಾಂತಿಯ ವಸ್ತುವನ್ನು ಬಳಸಿಕೊಂಡು ಕೃತಕವಾಗಿ ತಯಾರಿಸಿದ ವಸ್ತುಗಳಿಗೆ ಕೃತಕ ಕಾಂತ ಗಳು ಎನ್ನುವರು.
ಕೃತಕ ಕಾಂತ ಗಳನ್ನು ತಯಾರಿಸಲು ಅಲ್ ಕಿಕೊ ಎಂಬ ಮಿಶ್ರಲೋಹಗಳ ನ್ನು ಉಪಯೋಗಿಸುತ್ತಾರೆ. ಕೃತಕ ಕಾಂತಗಳು ನಿರ್ದಿಷ್ಟ ಆಕಾರವನ್ನು ಹೊಂದಿದೆ ನಿರ್ದಿಷ್ಟ ಆಕಾರವನ್ನು ಹೊಂದಿದೆ ಅಧಿಕವಾಗಿರುತ್ತದೆ.

ಕಾಂತದ ವಿಧಗಳು:
ದಂಡಕಾಂತ ಲಾಳ ಕಾಂತ ಸೂಜಿ ಕಾಂತ.

ಕಾಂತದ ಗುಣ ಲಕ್ಷಣಗಳು:

  • ಕಾಂತಾ ಕಾಂತಿಯ ವಸ್ತುಗಳನ್ನು ಆಕರ್ಷಿಸುತ್ತದೆ ತಕೆ ದಿಕ್ಕು ತೋರಿಸುವ ಗುಣವಿದೆ
  • ಕಾಂತ ಕೆ ಆಕರ್ಷಣ ಬಲವು ತುದಿಗಳಲ್ಲಿ ಅಧಿಕವಾಗಿದೆ.
  • ಕಾಂತ ಕ್ಕೆ ಎರಡು ಧ್ರುವಗಳ ಇದು ಉತ್ತರ ದ್ರುವ ದಕ್ಷಿಣ ದ್ರುವ. 
  • ಕಾಂತವು ಸಮಿತಿಯ  ಧ್ರುವಗಳು ವಿಕರ್ಷಿಸುತ್ತವೆ ಮತ್ತು ವಿಜಾತಿಯ ಧ್ರುವಗಳನ್ನು ಆಕರ್ಷಿಸುತ್ತದೆ 
  • ಕಾಂತದ ಧ್ರುವಗಳನ್ನು ಪ್ರತ್ಯೇಕ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ ವಿಜ್ಞಾನಿ ವಿಲಿಯಮ್ ಗಿಲ್ಬರ್ಟ್. ಇವರನ್ನು ಕಾಂತದಕಾಂತದ ಜನಕ ಎಂದು ಕರೆಯುತ್ತಾರೆ. 
  • ಇವರು ರಚಿಸಿದ ಗ್ರಂಥ ಮ್ಯಾಗ್ನೆಟ್. ಈ ಗ್ರಂಥದಲ್ಲಿ ಎಲೆಕ್ಟ್ರಿಸಿಟಿ ಎಂಬ ಪದವನ್ನು ಪ್ರಥಮಬಾರಿಗೆ ಬಳಸಲಾಯಿತು.



  • ಕಾಂತಕ್ಷೇತ್ರ
  • ಕಾಂತೀಯ ಬಲ ರೇಖೆಗಳು ಒಟ್ಟು ಮೊತ್ತವನ್ನು ಕಾಂತಕ್ಷೇತ್ರ ಎನ್ನುವರು. 
  • ಎಲ್ಲಿ ಕಾಂತಕ್ಷೇತ್ರ ಪ್ರಬಲವಾಗಿರುತ್ತದೆ ಯು ಕಾಂತೀಯ ಬಲ ರೇಖೆಗಳು ದಟ್ಟವಾಗಿರುತ್ತದೆ. 
  • ಎಲ್ಲಿ ಕಾಂತಕ್ಷೇತ್ರ ದುರ್ಬಲವಾಗಿ ಇರುತ್ತದೆಯೋ ಅಲ್ಲಿ ಕಾಂತೀಯ ಬಲ ರೇಖೆಗಳು ವಿರಳವಾಗಿರುತ್ತವೆ.
  • ಕಾಂತಕ್ಷೇತ್ರ ಧ್ರುವಗಳಲ್ಲಿ ಅಧಿಕವಾಗಿರುತ್ತದೆ.
  • ಕಾಂತದ ಬಲ ರೇಖೆಗಳು ಧ್ರುವದಿಂದ ಧ್ರುವಕ್ಕೆ ಚಾಚಿರುತ್ತವೆ ಉತ್ತರ ಧ್ರುವದಿಂದ ದಕ್ಷಿಣ ಧ್ರುವದಲ್ಲಿ ಅಂತ್ಯವಾಗುತ್ತದೆ.
  • ಕಾಂತೀಯ ಬಲ ರೇಖೆಗಳು ಒಂದನ್ನೊಂದು ದೂರ ತಳ್ಳುತ್ತವೆ ಹೊರತು ಅವು ಎಂದಿಗೂ ಛೇದಿಸುವುದಿಲ್ಲ.
  • ಬಲ ರೇಖೆಗಳು ಕಾಗದ ಗಾಜು ರಂತಹ ವಸ್ತುಗಳ ಮೂಲಕ ಹಾದುಹೋಗುತ್ತವೆ.
  • ಕಾಂತಿ ಬಲ ರೇಖೆಗಳು ಕಮಾನಿನ ಆಕಾರದಲ್ಲಿ ಇರುತ್ತವೆ.


ಕಾಂತೀಯ ವಸ್ತುಗಳು.
ಯಾವ ವಸ್ತುಗಳು ಕಾಲದಿಂದ ಆಕರ್ಷಿತವಾಗುತ್ತವೆ ಯು ಅಂತಹ ವಸ್ತುಗಳನ್ನು ಕಾಂತೀಯ ವಸ್ತುಗಳು ಎನ್ನುವರು.   ಉದಾಹರಣೆಗೆ ಕಬ್ಬಿಣ ಉಕ್ಕು ಕೋಬಾಲ್ಟ್, ನೀಕ್ಕಲ್.
ಆಕಾಂತೀಯ ವಸ್ತುಗಳು.
ಯಾವ ವಸ್ತುಗಳು ಕಾಲದಿಂದ ಆಕರ್ಷಿಸಲು ಪಡುವುದಿಲ್ಲ ಅಂತಹ ವಸ್ತುಗಳನ್ನು ವಸ್ತುಗಳು ಎನ್ನುವರು ಪ್ಲಾಸ್ಟಿಕ್ ಗಾಜು ರಬ್ಬರ್ ಇತ್ಯಾದಿ.