Thursday, January 23, 2020

ಮಾನವನ ಮಿದುಳು

                                ಮಾನವನ ಮಿದುಳು

ಮಿದುಳು ದೇಹದ ಪ್ರಮುಖ ಸಹಭಾಗಿತ್ವ ಮತ್ತು ನಿಯಂತ್ರಣ ಭಾಗ. ಮಾನವನ ಮೆದುಳಿನ ಹೊರ ನೋಟದಲ್ಲಿ ಮೂರು ನಿರ್ದಿಷ್ಟ ಭಾಗಗಳನ್ನು ಕಾಣಬಹುದು. ಅವು

1) ಮುಮ್ಮೆದುಳು
2) ಮಧ್ಯ ಮೆದುಳು
3) ಹಿಮ್ಮೆದುಳು

 👉ಮಿದುಳಿನ ಹೊರನೋಟದ ಭಾಗಗಳು :-

1) ಮುಮ್ಮೆದುಳು (fore brain) :-
ಮುಮ್ಮೆದುಳು ಮಿದುಳಿನ ಅತಿ ಸಂಕೀರ್ಣ ಭಾಗ. ಇದರಲ್ಲಿ ಮಹಾಮಸ್ತಿಷ್ಕ ಮತ್ತು ಡೈಎನ್‌ಸೆಫೆಲಾನ್ ಎಂಬ ಎರಡು ಪ್ರಮುಖ ಭಾಗಗಳಿವೆ.

A) ಮಹಾಮಸ್ತಿಷ್ಕ (cerebrum) :-

ಮಿದುಳಿನ ಅತ್ಯಂತ ದೊಡ್ಡ ಭಾಗ. ಇದು ಹೆಚ್ಚು ಅಭಿವೃದ್ಧಿ ಹೊಂದಿದೆ.ಮೆದುಳಿನ ಒಟ್ಟು ತೂಕದ ಸುಮಾರು ಶೇ.80 ರಷ್ಟು ತೂಕ, ಇದರದು.ಇದರ ಮೇಲ್ಮೈಯು ವಕ್ರವಾಗಿ ಅನೇಕ ಮಡಿಕೆಗಳಿಂದ ಕೂಡಿದೆ.ಮಹಾಮಸ್ತಿಷ್ಕದಲ್ಲಿ ಎರಡು ಅರ್ಧ ಸಮಗೋಳಗಳಿವೆ - ಅವು ಬಲ ಗೋಳಾರ್ಧ ಮತ್ತು ಎಡ ಗೋಳಾರ್ಧ.ಎರಡು ಗೋಳಾರ್ಧಗಳು ಒಂದು ಎಳೆಯಿಂದ ಬೇರ್ಪಟ್ಟಿದ್ದರೂ, ಒಳಗೆ ಒಂದಕ್ಕೊಂದು "ಕಾರ್ಪಸ್ ಕಲೋಸಮ್" ಎಂಬ ನರಗಳ ಎಳೆಯಿಂದ ಸೇರ್ಪಡೆಯಾಗಿದೆ.ದೇಹದ ಎಡಭಾಗದಿಂದ ಬರುವ ನರಗಳು, ಮಹಾಮಸ್ತಿಷ್ಕದ ಬಲಗೋಳಾರ್ಧಕ್ಕೆ ಸಂಪರ್ಕ ಹೊಂದಿವೆ.ದೇಹದ ಬಲ ಭಾಗದಿಂದ ಬರುವ ನರಗಳು ಕತ್ತಿನ ಭಾಗದಲ್ಲಿ ಅಡ್ಡಹಾಯ್ದು ಮಹಾಮಸ್ತಿಷ್ಕದ ಎಡಗೋಳಾರರ್ಧಕ್ಕೆ ಸಂಪರ್ಕಗೊಂಡಿವೆ.ಮಹಾಮಸ್ತಿಷ್ಕದ ಹೊರಗಿನ ಕಾರ್ಟೆಕ್ಸ್ (ನರಕೋಶಗಳಿಂದ ಕೂಡಿದ ಬೂದು ಬಣ್ಣದ ವಸ್ತುವಿನಿಂದಾಗಿದೆ).ಮಹಾಮಸ್ತಿಷ್ಕದ ಒಳಗಿನ ಮೆಡುಲ್ಲಾ ಭಾಗವು (ಆಕ್ಸಾನ್ ಮತ್ತು ಡೆಂಡ್ರೈಟ್ ಗಳು ಸೇರಿದ ಬಿಳಿಯ ವಸ್ತುವಿನಿಂದಾಗಿದೆ).ಮಾನವನ ಉನ್ನತವಾದ ಬುದ್ದಿವಂತಿಕೆಗೆ, ಹೆಚ್ಚಿನ ಮೇಲ್ಮೈ ವಿಸ್ತೀರ್ಣವನ್ನು ಹೊಂದಿರುವ ಕಾರ್ಟೆಕ್ಸ್ ನ ವಿಸ್ತೃತ ಬೆಳವಣಿಗೆಯೇ ಕಾರಣ.

B) ಡೈಎನ್‌ಸೆಫೆಲಾನ್ :-

ಡೈಎನ್‌ಸೆಫೆಲಾನ್  ಮಹಾಮಸ್ತಿಷ್ಕದಿಂದ ಆವೃತವಾಗಿರುವ ಒಂದು ಚಿಕ್ಕ ಭಾಗ.ಡೈಎನ್‌ಸೆಫೆಲಾನ್ ನಲ್ಲಿ "ಥಲಾಮಸ್ ಮತ್ತು ಹೈಪೋಥಲಾಮಸ್ ಎಂಬ ಎರಡು ಭಾಗಗಳಿವೆ.ಥಲಾಮಸ್ ಜ್ಞಾನೇಂದ್ರಿಯಗಳಿಂದ ಸ್ವೀಕರಿಸಿದ ನರಾವೇಗಗಳನ್ನು ಮಿದುಳಿನ ಕಾರ್ಟೆಕ್ಸ್ ಗೆ ಕಳುಹಿಸುತ್ತದೆ.ಹೈಪೋಥಲಾಮಸ್ ದೇಹದ ಉಷ್ಣತೆ, ದೇಹದ ಸಮತೋಲನ, ಹಸಿವು ಮತ್ತು ನಿದ್ರೆಗಳನ್ನು ನಿಯಂತ್ರಿಸುತ್ತದೆ. ಜೊತೆಗೆ ಸ್ವನಿಯಂತ್ರಕ ನರವ್ಯೂಹ ಮತ್ತು ಪಿಟ್ಯೂಟರಿ ಗ್ರಂಥಿಯನ್ನು ನಿಯಂತ್ರಿಸುತ್ತದೆ.

 2) ಮಧ್ಯ ಮಿದುಳು (Mid brain) :-

ನರತಂತುಗಳಿಂದ ಕೂಡಿದ ಮಿದುಳಿನ ಒಂದು ಚಿಕ್ಕ ಭಾಗ.ಮಧ್ಯಮಿದುಳು ಮುಮ್ಮೆದಳು ಮತ್ತು ಹಿಮ್ಮೆದುಳಿಗೆ ಸಂಬಂಧ ಕಲ್ಪಿಸುತ್ತದೆ. ಜೊತೆಗೆ ಸಂದೇಶಗಳನ್ನು ಹಿಮ್ಮೆದುಳಿನಿಂದ ಮುಮ್ಮೆದುಳಿಗೆ ಸಾಗಿಸುತ್ತದೆ.ದೃಶ್ಯ ಮತ್ತು ಶ್ರವ್ಯಕ್ಕೆ ಸಂಬಂಧಿಸಿದ ಚೋದನೆಗಳಿಗನುಗುಣವಾಗಿ ತಲೆ ಮತ್ತು ಕತ್ತಿನ ಪರಾವರ್ತಿತ ಚಲನೆಗಳಿಗೆ ಇದು ಕಾರಣ.

 3) ಹಿಮ್ಮೆದುಳು (Hind brain) :-

ಹಿಮ್ಮೆದುಳಲ್ಲಿ ಅನುಮಸ್ತಿಷ್ಕ, ಪಾನ್ಸ್ ಮತ್ತು ಮೆಡುಲ್ಲಾ ಅಬ್ಲಾಂಗೇಟ್ ಎಂಬ ಮೂರು ಭಾಗಗಳಿವೆ.

 A) ಅನುಮಸ್ತಿಷ್ಕ (Cerebellum) :-

ಅನುಮಸ್ತಿಷ್ಕ ಮೆದುಳಿನ ಎರಡನೇ ದೊಡ್ಡ ಭಾಗ.ಅನುಮಸ್ತಿಷ್ಕ ಮಹಾಮಸ್ತಿಷ್ಕದ ಕೆಳಗೆ ಮತ್ತು ಹಿಂಭಾಗದಲ್ಲಿದೆ. ಮತ್ತು ದೇಹದ ಸಮತೋಲನವನ್ನು ಕಾಪಾಡುತ್ತದೆ.



B) ಪಾನ್ಸ್ (Pons) :-

ಪಾನ್ಸ್ ಅನುಮಸ್ತಿಷ್ಕದ ಮುಂದೆ ಮಧ್ಯಮಿದುಳಿನ ಕೆಳಗೆ ಮತ್ತು ಮೆಡುಲ್ಲಾ ಅಬ್ಲಾಂಗೇಟದ ಮೇಲೆ ಇದೆ.ಪಾನ್ಸ್ ಆಹಾರ ಅಗಿಯುವುದು, ಮುಖದ ಭಾವ ಮತ್ತು ಉಸಿರಾಟದ ಕ್ರಿಯೆಗಳನ್ನು ನಿಯಂತ್ರಿಸುತ್ತದೆ. 

 1) ಪಾನ್ಸ್ ವರೋಲಿ (ಪಾನ್ಸ್)ನಲ್ಲಿ ಎಷ್ಟು ಜೊತೆ ಮೆದುಳು ನರಗಳನ್ನು ಹೊಂದಿರುತ್ತದೆ?

A). 12 ಜೊತೆ 
B). 8 ಜೊತೆ 
C). 4 ಜೊತೆ ✔✔
D). 6 ಜೊತೆ 

👉4 ಜೊತೆ:
ಪಾನ್ಸ್ ವರೋಲಿ (ಪಾನ್ಸ್)ನಲ್ಲಿ 4 ಜೊತೆ ಮೆದುಳು ನರಗಳನ್ನು ಹೊಂದಿರುತ್ತದೆ. ಪಾನ್ಸ್ ಆಹಾರ ಅಗಿಯುವುದು, ಮುಖದ ಭಾವ ಮತ್ತು ಉಸಿರಾಟದ ಕ್ರಿಯೆಗಳನ್ನು ನಿಯಂತ್ರಿಸುತ್ತದೆ.

2) ಪಿಟ್ಯೂಟರಿ ಗ್ರಂಥಿಯು ದೇಹದ ಯಾವ ಭಾಗದಲ್ಲಿ ಕಂಡುಬರುತ್ತದೆ?
A). ಶ್ವಾಸಕೋಶ 
B). ಕುತ್ತಿಗೆ 
C). ಜಠರ 
D). ಮೆದುಳು ✔✔

👉ಮೆದುಳು:
ಪಿಟ್ಯೂಟರಿ ಗ್ರಂಥಿಯು ಮೆದುಳಿನ ತಳಭಾಗದಲ್ಲಿದೆ ಕಂಡು ಬರುತ್ತದೆ. ಪಿಟ್ಯೂಟರಿ ಗ್ರಂಥಿಯಲ್ಲಿ ಮುಂಭಾಗದ ಹಾಲೆ ಮತ್ತು ಹಿಂಭಾಗದ ಹಾಲೆ ಎಂಬ ಎರಡು ಭಾಗಗಳಿವೆ.  ಪಿಟ್ಯುಟರಿ ಗ್ರಂಥಿಯನ್ನು " ಅಂತಃಸ್ರಾವಕ ವಾದ್ಯಮೇಳದ ನಿರ್ವಾಹಕ " ಎಂದು ಕರೆಯುತ್ತಾರೆ.

3) ಅಲೆದಾಡುವ ನರ ಎಂದು ಯಾವ ನರವನ್ನು ಕರೆಯುತ್ತಾರೆ?

A). ಪಾಗಸ್ 
B). ವೇಗಸ್ ✔✔
C). ಮೆಡುಲ್ಲಾಸ್ 
D). ಮೇಲಿನ ಯಾವುದು ಅಲ್ಲ 

👉ವೇಗಸ್:
ಮೆದುಳಿನ ಮುಖ್ಯ ನರಗಳಲ್ಲೊಂದಾದ 'ವೇಗಸ್' ಎಂಬ ನರವನ್ನು ಅಲೆದಾಡುವ ನರ ಎಂದು ಕರೆಯುತ್ತಾರೆ. ಕಾರಣ ಈ ನರವು ಸ್ವಯಂ ನಿಯತ್ರಂಕ ನರವ್ಯೂಹದ ಭಾಗವಾಗಿದೆ.

4) ಮಿದುಳು ಬಳ್ಳಿ ಯಾವ ಆಕಾರದಲ್ಲಿದೆ?

A). ಸಿಲಿಂಡರ್ ✔✔
B). ಚೌಕಾಕಾರ 
C). ವೃತ್ತ 
D). ಆಯತಾ

👉ಸಿಲಿಂಡರ್:
ಮಿದುಳು ಬಳ್ಳಿಯು ಸಿಲಿಂಡರ್ ಆಕಾರದಲ್ಲಿ ಕಶೇರುಸ್ತಂಭದಲ್ಲಿ ಹಾದು ಹೋಗುತ್ತದೆ.ಇದು ಅನೇಕ ನರಕೋಶ ಮತ್ತು ನರತಂತುಗಳಿಂದಾಗಿದೆ.ಇದರ ಮಧ್ಯ ಭಾಗದಲ್ಲಿ ನರಕೋಶಗಳಿಂದಾದ ಬೂದು ವಸ್ತುವಿದೆ. ಇದರ ಸುತ್ತಲೂ ನರ ತಂತುಗಳಿಂದಾದ ಬಿಳಿವಸ್ತು ಇದೆ. 

5) ಪರೀಧಿ ನರವ್ಯೂಹವು ಎಷ್ಟು ಜೊತೆ ಮೆದುಳು ನರಗಳನ್ನು ಒಳಗೊಂಡಿದೆ?

A). 10 ಜೊತೆ 
B). 12 ಜೊತೆ ✔✔
C). 40 ಜೊತೆ 
D). 34 ಜೊತೆ 

👉12 ಜೊತೆ
ಪರೀಧಿ ನರವ್ಯೂಹವು 12 ಜೊತೆ ಮೆದುಳು ನರಗಳನ್ನು ಒಳಗೊಂಡಿದೆ ಮತ್ತು 31ಜೊತೆ ಮೆದುಳು ಬಳ್ಳಿಯ ನರಗಳನ್ನು ಒಳಗೊಂಡಿದೆ. ಮೆದುಳು ನರಗಳು ಮೆದುಳಿನ ನಾನಾ ಭಾಗಗಳಿಂದ ಹೊರಟು ತಲೆಯಲ್ಲಿರುವ ಜ್ಞಾನೇಂದ್ರಿಯಗಳು ಸ್ನಾಯುಗಳು ಹಾಗೂ ಗ್ರಂಥಿಗಳ ಸಂಪರ್ಕ ಹೊಂದಿದೆ.


6) ಬುದ್ಧಿಲಬ್ಧವನ್ನು ಕಂಡುಹಿಡಿಯುವ ಸೂತ್ರದ ಬಗ್ಗೆ ತಿಳಿಸಿದ ವಿಜ್ಞಾನಿ ಯಾರು?

A). ರಿವ್ ರಾಕ್ಷೀ 
B). ಆಲ್ಫ್ರೇಡ್ ಬೀನೆ ✔✔
C). ಸ್ಟೀಫನ್ ಹಾರ್ಲ್ಸ್ 
D). ಐಸ್ತೊವನಿ 

Wednesday, January 22, 2020

ಉಪಗ್ರಹ ಹೊಂದಿದ ಗ್ರಹಗಳು

ಉಪಗ್ರಹ ಹೊಂದಿದ ಗ್ರಹಗಳು*


  • ಭೂಮಿಯ ಏಕೈಕ ಉಪಗ್ರಹ ಚಂದ್ರ
  • ಮಂಗಳಗ್ರಹದ. ಎರಡು ಉಪಗ್ರಹಗಳು ಡೈಮೋಸ್ ಮತ್ತು ಪೋಬೋಸ್
  • ಗುರುಗ್ರಹವು ಒಟ್ಟು 21ಉಪಗ್ರಹಗಳನ್ನು ಹೊಂದಿದೆ,ಗ್ಯಾನಿಮೆಡ್  ಐಓ .
  • ಶನಿಗ್ರಹ 18 ಉಪಗ್ರಹ ಹೊಂದಿದೆ ಅದರಲ್ಲೇ ದೊಡ್ಡ ಉಪಗ್ರಹ ಟೈಟಾನ್.
  • ಯುರೇನೆಸ್-ವಿಲಿಯಂ ಹರ್ಷಲ್1781
  • ನೆಪ್ಚೋನ್-ಜೋಹಾನ್ಸ್ ಗಾಲಿ1846
  • ಶನಿಗ್ರಹ-ಜೆ.ಸಿ.ಭಟ್ಟಾಚಾರ್ಯ ಮತ್ತು ಕುಪ್ಪೆಸ್ವಾಮಿ
  • ಶನಿಗ್ರಹ ಎರಡು ಉಂಗುರವನ್ನು ಹೊಂದಿದ ಗ್ರಹ.
  • ಗುರುಗ್ರಹ-ಗೆಲಿಲಿಯೋ ಗೆಲಲಿ.
  •  ಮಂಗಳ ಮತ್ತು ಗುರು ಗ್ರಹಗಳ ಮದ್ಯ ಕ್ಷುದ್ರ ಗ್ರಹಗಳು ಕಂಡುಬರುತ್ತವೆ.


Saturday, January 18, 2020

ರೋಗಗಳು ಮತ್ತು ರೋಗಕಾರಕಗಳು

ರೋಗಗಳು ಮತ್ತು ರೋಗಕಾರಕಗಳು

1. ಧನುರ್ವಾಯು( ಟೆಟಾನಸ್) – ಕ್ಲಾಸ್ಟ್ರೀಡಿಯಂ ಟೆಟನಿ

2. ಕ್ಷಯರೋಗ( ಟಿಬಿ) – ಟ್ಯುಬರ್‍ಕ್ಯುಲೋಬ್ಯಾಸಿಲಸ್

3. ಕಾಲರಾ – ವಿಬ್ರಿಯೋ ಕಾಲರೆ

4. ವಿಷಮಶೀತ ಜ್ವರ(ಟೈಫಾಯಿಡ್) – ಸಾಲ್ಮೋನೆಲ್ಲಾ ಟೈಫಿ

5. ಕುಷ್ಟರೋಗ – ಮೈಕೋಬ್ಯಾಕ್ಟೀರಿಯಂ ಲೆಪ್ರೆ

6. ಪ್ಲೇಗ್ – ಯೆರ್ಸಿನಿಯಾ ಪೆಸ್ಟೀಸ್

7. ಅಂಥ್ರಾಕ್ಸ್ ( ನೆರಡಿ ಜ್ವರ) – ಬೆಸಿಲಸ್ ಅಂಥ್ರಾಕ್ಸ್

8. ಸಿಪಿಲಿಸ್ – ಟ್ರೆಪೋನಿಮಾ ಪಾಲಿಡಿಯಂ

9. ಡಯೇರಿಯಾ – ಬ್ಯಾಸಿಲಸ್ ಕೋಲೈ

10. ಡಿಪ್ತೀರಿಯಾ –ಕೊರೆನಿ ಬ್ಯಾಕ್ಟೀರಿಯಂ ಡಿಪ್ತಿರಿಯೇ

11. ಇಂಪ್ಲೂಯೆಂಜಾ -ಹಿಮೋಫಿಲಿಸ್ ಇಂಪ್ಲೂಯೆಂಜಾ

12. ಜಾಂಡೀಸ್ – ಲೆಪ್ಟೋಸ್ಟಿರಾ ಸಿಟೆರೋ ಹಿಮೋರೇಜಿಯಾ

13. ನ್ಯೂಮೋನಿಯಾ – ಡಿಪ್ಲೋಕಾಕಸ್ ನ್ಯೂಮೋನಿಯಾ

14. ನಾಯಿಕೆಮ್ಮು -ಬೊರೆಡೆಲ್ಲಾ ಪರಟುಸಿಸ್

15. ಮಲೇರಿಯಾ – ಅನಾಫಿಲಿಸ್ ಹೆಣ್ಣುಸೊಳ್ಳೆ

16. ರೇಬಿಸ್ – ರ್ಯಾಬ್ದೋವಿರಿಡೆ

17. ಪೋಲಿಯೋ – ಪೋಲಿಯೋ ವೈರಸ್

18. ಮಂಗನಬಾವು – ಮಂಪ್ಸ್ ವೈರಸ್

19. ಚಿಕನ್ ಪಾಕ್ಸ್ ( ಸೀತಾಳೆ ಸಿಡುಬು)– ಚಿಕನ್ ಪಾಕ್ಸ್ ವೈರಸ್

20. ಕಾಲು ಬಾಯಿ ರೋಗ – ವೈರಸ್

21. ಡೆಂಗ್ಯೂ ಜ್ವರ – ಈಡಿಸ್ ಸೊಳ್ಳೆಗಳು

22. ಹಳದಿ ಜ್ವರ – ಈಡಿಸ್ ಸೊಳ್ಳೆ

23. ನಿದ್ರಾರೋಗ – ಟ್ರೈಪನೋಸೋಮಾ

24. ಅಮೀಬಿಕ್ ಆಮಶಂಕೆ – ಎಂಟಮೀಬಾ

25. ಕಾಲಾ ಅಜಾರ್ – ಲೆಶ್ಮಾನಿಯಾ

26. ಆನೆ ಕಾಲು ರೋಗ – ಕ್ಯುಲೇಕ್ಸ್ ಸೊಳ್ಳೆ

27. ಚಿಕನ್ ಗುನ್ಯಾ – ಈಡಿಸ್ ಈಜಿಪ್ಟಿ ಸೊಳ್ಳೆ

28. ಜಿಯಾರ್ಡ ಯಾಸಿಸ್ – ಜಿಯಾರ್ಡಿಯಾ

29. ವಿಷಾಹಾರ – ಕ್ಲೋಸ್ಟ್ರೀಡಿಯಂ ಬೊಟುಲಿನಂ

30. ಏಡ್ಸ್ – ಹೆಚ್. ಐ. ವಿ

Friday, January 17, 2020

1.ಆಮ್ಲ ಮಿಶ್ರೀತ ನೀರಿನ ವಿದ್ಯುಭಜನೆಯಲ್ಲಿ ನಾವು ಆಯ್ಕೆ ಮಾಡಬಹುದಾದ ವಿಧ್ಯುತ್ತಿನ ವಿಧ?
1.ಎ.ಸಿ
2.ಉನ್ನತ ವೋಲ್ಟೆಜ್ ಎ.ಸಿ
3.ಎ.ಸಿ ಮತ್ತು ಡಿ.ಸಿ
4.ಡಿ.ಸಿ★

2.ಪಂಚವೇಲೆನ್ಸಿ ಇರುವ ಡೋಪೆಂಟ್ ಗೆ ಉದಾಹರಣೆ ಎಂದರೆ
1.ಬೊರಾನ್
2.ರಂಜಕ★
3.ಅಲ್ಯೂಮಿನಿಯಂ
4.ಇಂಡಿಯಂ

3.ಡೈಯೋಡಿನ ಜೀಷ್ಟಿಕಾರಕ ಕ್ರಿಯೆಯು ಕೆಳಗಿನ ಅಂಶವನ್ನು ಆಧರಿಸಿದೆ.
1.ಮುನ್ನಡೆ ಒಲುಮೆ★
2ವ್ಯತಿರಿಕ್ತ ಒಲುಮೆ
3.ರಂಧ್ರಗಳು
4.ಡೋಂಪಿಂಗ್

4. ಸಾಧಾರಣ ಗೆಲಾಕ್ಸಿಗಳಿಗಿಂತ ಸಾವಿರಾರು ಪಟ್ಟು ಪ್ರಕಾಶಮಾನದ ಗೆಲಾಕ್ಸಿಗಳ ಹೆಸರು
1.ಪಲ್ಸಾರ್
2.ನೋವಾ
3.ಕ್ವಾಸಾರ್★
4.ಸೂಪರ್ ನೋವಾ

5.ಸಾಪೇಕ್ಷವಾಗಿ ಕಡಿಮೆ ತಾಪಮಾನದ ನಕ್ಷತ್ರವೆಂದರೆ.
1.ರೀಗೆಲ್
2.ಸಿರಿಯಸ್
3.ಆರ್ಕ್ಟಟ್ರಸ್
4.ಬೀಟಲ್ ಗೀಸ್★

6.ಸೋನಾರ್ ಉಪಕರಣದಿಂದ ನಾವು ಪತ್ತೆ ಮಾಡಬಹುದಾದದ್ದು..
1.ಶ್ರವಣಾತೀತ ಶಬ್ದತರಂಗ
2.ಶತೃ ವಿಮಾನಗಳ ದೂರ
3.ನೀರಿನ ಆಳದಲ್ಲಿರುವ ವಸ್ತುಗಳ ದೂರ★
4.ಮಾನವ ದೇಹದ ಆಂತರಿಕ ಭಾಗಗಳ ದೋಷ

7.ರೋಹಿತ ದರ್ಶಕದಲ್ಲಿ ಮಸೂರ ಮತ್ತು ನೇಳಗಂಡಿ ಇರುವ ಭಾಗದ ಹೆಸರು.
1.ಆಶ್ರಗ ಪೀಠ
2.ಸಮಾಂತರ★
3.ದೂರದರ್ಶಕ
4.ರೋಹಿತ ಮಾಪಕ

8. ಈ ಕೆಳಗಿನ ವಿದ್ಯಮಾನಗಳಲ್ಲಿ ಆಘಾತ ಬೆಳಕಿನ ಕಿರಣಗಳ ಆವೃತ್ತಿ ಬದಲಾಗುತ್ತದೆ
1.ರಾಮನ್ ಪರಿಣಾಮ ★
2.ರಾಯ್ಲೇ ಚದುರವಿಕೆ
3.ಟೆಂಡಾಲ್ ಪರಿಣಾಮ
4.ರೋಹಿತಶಾಸ್ತ್ರ

9.ರೇಡಾರ್ ಗನ್ ಬಳಸಿ ಪತ್ತೆ ಮಾಡಬಹುದಾದ ಸಂಗತಿ ಎಂದರೆ
1.ನೀರಿನಡಿ ಇರುವ ವಸ್ತುಗಳು
2.ಶತ್ರು ವಿಮಾನಗಳು
3.ವೇಗಮಿತಿ ಮೀರುವ ವಾಹನಗಳು★
4.ನಕ್ಷತ್ರಗಳ ವೇಗ

10. ಗುರುತ್ವ ವೇಗೋತ್ಕರ್ಷದ ಬೆಲೆಯ ವಿಲೋಮಮ ಅನುಪಾತದಲ್ಲಿರುವ ಅಂಶ
1.ರಾಶಿಗಳ ಗುಣಲಬ್ಧ
2.ಎತ್ತರ★
3.ಎತ್ತರದ ವರ್ಗ
4.ಭೂಮಿಯ ರಾಶಿಯ ವರ್ಗ

11.ಒಂದು ದ್ರವ ಮಾಧ್ಯಮದಿಂದ ವಿಭಿನ್ನ ಸಾಂದ್ರತೆಯ ವಸ್ತುಗಳನ್ನು ಬೇಪರ್ಡಿಸುವ ಸಾಧನವೆಂದರೆ
1.ಸೆಂಟ್ರಿಫ್ಯೂಜ್★
2.ನಿಯಂತ್ರಕ
3.ಕೇಂದ್ರತ್ಯಾಗಿ ಪಂಪು
4.ರಂದ್ರಗಳಿರುವ ಸಿಲಿಂಡರಾಕೃತಿಯ ಪಾತ್ರೆ

12.ತಿರುವು ರಸ್ತೆಗಳ ಹೊರ ಅಂಚನ್ನು ಎತ್ತರಿಸಿ ಓರೆ ಮಾಡುವುದಕ್ಕೆ ಕಾರಣ
1.ಕೇಂದ್ರಾಭಿಮುಖ ವೇಗೋತ್ಕರ್ಷ
2.ಕೇಂದ್ರತ್ಯಾಗಿ ಬಲ★
3.ಕೇಂದ್ರಾಬಿಮುಖ ಬಲ
4.ಕೇಂದ್ರತ್ಯಾಗಿ ಪ್ರತಿಕ್ರಿಯೆ

  13.ಸೌರಕೋಶದ ತಯಾರಿಕೆಯಲ್ಲಿ ಉಪಯೋಗಿಸುವ ಮೂಲವಸ್ತು.
1.ಕಾರ್ಬನ್
2.ಸೋಡಿಯಮ್
3.ಸಿಲಿಕಾನ್★
4.ಕ್ಯಾಲ್ಸಿಯಂ

14.ಜಲಗಾಜಿನ ರಾಸಾಯನಿಕ ಹೆಸರೇನು.
1.ಸೋಡಿಯಮ್ ಆಲ್ಯುಮಿನಿಯಮ್ ಸಿಲಿಕೇಟ್
2. ಸಿಲಿಕಾನ್ಕಾಬೈರ್ಟ್
3.ಸಿಲಿಕಾನ್ ಡೈ ಆಕ್ಸೈಡ್
4.ಸೋಡಿಯಮ್ ಸಿಲಿಕೇಟ್★

15. ಅಸ್ಫಟಿಕ ರೂಪದ ಸಿಲಿಕಾನ್ ಪಡೆಯಲು ಬಳಸುವ ಅಷಕರ್ಷಣಕಾರಿ
1.ಕೋಕ್
2.ಕಾರ್ಬನ್
3.ಮೆಗ್ನಿಶಿಯಮ್★
4.ಗ್ರಾಫೈಟ್

16.ಸಮಾಂಗಿಗಳು (ಐಸೋಮರ್)ಭಿನ್ನವಾಗಿರುವ ಅಂಶ
1.ಅಣುಸೂತ್ರ
2.ರಚನಾಸೂತ್ರ★
3.ಅಣುರಾಶಿ
4.ಕಾರ್ಬನ್ ಪರಮಾಣುಗಳ ಸಂಖ್ಯೆ

17.ಸೋಡಿಯಮ್ ಸ್ಟಿಯರೇಟ್ ಎಂದರೆ
1.ಮಾರ್ಜಕ
2.ಸಸ್ಯಮೂಲದ ಕೊಬ್ಬು
3.ಸಾಬೂನು★
4.ಕೊಬ್ಬಿನ ಆಮ್ಲ

18.ರಸದೂತ ಎಂದರೆ
1.ಪ್ರೋಟೀನುಗಳು
2.ಅಮೀನೋ ಆಮ್ಲಗಳು
3.ಹಾರ್ಮೋನುಗಳು★
4.ಸ್ಟಿರಾಯ್ಡ್‌ಗಳು

19.ಶಬ್ದ ತರಂಗಗಳನ್ನು ಸಂಗ್ರಹಿಸುವ ಕಿವಿಯ ಭಾಗ
1.ಪೆರಿಲೀಫ್
2.ಕರ್ಣನಾಳ
3ಎಂಡೋಲಿಂಫ್
4.ಹಾಲೆ★

20.ಬೈಲಿರೂಬಿನ್ ಎಂಬ ವರ್ಣದ್ರವ್ಯವು ಎಲ್ಲಿದೆ
1.ಕೇಂಪುರಕ್ತಕಣ★
2.ಬಿಳಿರಕ್ತಕಣ
3.ಪ್ಲೇಟ್ ಲೇಟ್

ರಸಾಯನಶಾಸ್ತ್ರ ಸೂತ್ರಗಳು

ರಸಾಯನಶಾಸ್ತ್ರ ಸೂತ್ರ

 1. ಆಮ್ಲಜನಕ - O₂

 2. ಸಾರಜನಕ - N₂

 3. ಹೈಡ್ರೋಜನ್ - H₂

 4. ಕಾರ್ಬನ್ ಡೈಆಕ್ಸೈಡ್ - CO₂

 5. ಕಾರ್ಬನ್ ಮಾನಾಕ್ಸೈಡ್ - ಸಿಒ

 6. ಸಲ್ಫರ್ ಡೈಆಕ್ಸೈಡ್ - SO₂

 7. ಸಾರಜನಕ ಡೈಆಕ್ಸೈಡ್ - NO₂

 8. ಸಾರಜನಕ ಮಾನಾಕ್ಸೈಡ್ (ನೈಟ್ರಿಕ್ ಆಕ್ಸೈಡ್) - NO

 9. ಡೈನೈಟ್ರೋಜನ್ ಆಕ್ಸೈಡ್ (ನೈಟ್ರಸ್ ಆಕ್ಸೈಡ್) - N₂O

 10. ಕ್ಲೋರಿನ್ - Cl₂

 11. ಹೈಡ್ರೋಜನ್ ಕ್ಲೋರೈಡ್ - ಎಚ್‌ಸಿಎಲ್

 12. ಅಮೋನಿಯಾ - NH₃

 ಆಮ್ಲ
 13. ಹೈಡ್ರೋಕ್ಲೋರಿಕ್ ಆಮ್ಲ - ಎಚ್‌ಸಿಎಲ್

 14. ಸಲ್ಫ್ಯೂರಿಕ್ ಆಮ್ಲ - H₂SO₄

 15. ನೈಟ್ರಿಕ್ ಆಮ್ಲ - HNO₃

 16. ಫಾಸ್ಪರಿಕ್ ಆಮ್ಲ - H₃PO₄

 17. ಕಾರ್ಬೊನಿಕ್ ಆಮ್ಲ - H₂CO₃

 ಕ್ಷಾರ
 18. ಸೋಡಿಯಂ ಹೈಡ್ರಾಕ್ಸೈಡ್ - NaOH

 19. ಪೊಟ್ಯಾಸಿಯಮ್ ಹೈಡ್ರಾಕ್ಸೈಡ್ - ಕೆಒಹೆಚ್

 20. ಕ್ಯಾಲ್ಸಿಯಂ ಹೈಡ್ರಾಕ್ಸೈಡ್ - Ca (OH)

 ಉಪ್ಪು
 21. ಸೋಡಿಯಂ ಕ್ಲೋರೈಡ್ - NaCl

 22. ಕಾರ್ಬೊನೇಟ್ ಸೋಡಿಯಂ - Na₂CO₃

 23. ಕ್ಯಾಲ್ಸಿಯಂ ಕಾರ್ಬೊನೇಟ್ - CaCO₃

 24. ಕ್ಯಾಲ್ಸಿಯಂ ಸಲ್ಫೇಟ್ - CaSO₄

 25. ಅಮೋನಿಯಂ ಸಲ್ಫೇಟ್ - (NH₄)₂SO₄

 26. ನೈಟ್ರೇಟ್ ಪೊಟ್ಯಾಸಿಯಮ್ - KNO₃


 27. ಚಾಕ್ - ಕ್ಯಾಲ್ಸಿಯಂ ಕಾರ್ಬೊನೇಟ್ - CaCO₃

 28. ದ್ರಾಕ್ಷಿಹಣ್ಣು - ಗ್ಲೂಕೋಸ್ - C6H₁₂O6

 29. ಆಲ್ಕೋಹಾಲ್ - C₂H5 OH

 30. ಕಾಸ್ಟಿಕ್ ಪೊಟ್ಯಾಶ್ - ಪೊಟ್ಯಾಸಿಯಮ್ ಹೈಡ್ರಾಕ್ಸೈಡ್ - KoH

 31. ಸೋಡಾ ತಿನ್ನುವುದು - ಸೋಡಿಯಂ ಬೈಕಾರ್ಬನೇಟ್ - NaHCO₃

 32. ಸುಣ್ಣ - ಕ್ಯಾಲ್ಸಿಯಂ ಆಕ್ಸೈಡ್ - CaO

 33. ಜಿಪ್ಸಮ್ - ಕ್ಯಾಲ್ಸಿಯಂ ಸಲ್ಫೇಟ್ - CaSO₄.2H₂O

 34. ಟಿ.ಎನ್.ಟಿ.  - ಟ್ರೈ ನೈಟ್ರೋ ಟ್ಯಾಲಿನ್ - C6H₂CH₃ (NO₂)

 35.  ಸೋಡಿಯಂ ಕಾರ್ಬೊನೇಟ್ Na₂CO₃

 36. ನೀಲಿ ಥಾಥ್ - ತಾಮ್ರದ ಸಲ್ಫೇಟ್ - CuSO₄

 37. ಮೋಲಾರ್ - ಅಮೋನಿಯಂ ಕ್ಲೋರೈಡ್ - NH₄Cl

 38. ಆಲಮ್ - ಪೊಟ್ಯಾಸಿಯಮ್ ಅಲ್ಯೂಮಿನಿಯಂ ಸಲ್ಫೇಟ್ - K₂SO₄Al₂ (SO₄) ₃.24H₂O

 39. ತಣಿಸಿದ ಸುಣ್ಣ - ಕ್ಯಾಲ್ಸಿಯಂ ಹೈಡ್ರಾಕ್ಸೈಡ್ - Ca (OH)

 40. ಪಿಷ್ಟ - ಪಿಷ್ಟ - C6 H 10 O 5

 41. ನಗುವ ಅನಿಲ - ನೈಟ್ರಸ್ ಆಕ್ಸೈಡ್ - N₂O

 42.  ಪೊಟ್ಯಾಸಿಯಮ್ ಪರ್ಮಾಂಗನೇಟ್ - KMnO₄

 43. ಕೆಂಪು ವರ್ಮಿಲಿಯನ್ - ಸೀಸದ ಪ್ಯಾರಾಕ್ಸೈಡ್ - Pb₃O₄

 44. ಡ್ರೈ ಐಸ್ - ಘನ ಕಾರ್ಬನ್-ಡಯ್-ಆಕ್ಸೈಡ್ - CO₂

 45.  ಪೊಟ್ಯಾಸಿಯಮ್ ನೈಟ್ರೇಟ್ - KNO₃

 46. ​​ವಿನೆಗರ್ - ಅಸಿಟಿಕ್ ಆಮ್ಲದ ದ್ರಾವಣವನ್ನು ದುರ್ಬಲಗೊಳಿಸಿ - CH₃COOH

 47. ಸುಹಾಗಾ - ಬೊರಾಕ್ಸ್ - Na₂B₄O7.10H₂O

 48. ಸ್ಪಿರಿಟ್ - ಮೀಥೈಲ್ ಆಲ್ಕೋಹಾಲ್ - CH₃OH

 49. ಸ್ಲೇಟ್ - ಸಿಲಿಕಾ ಅಲ್ಯೂಮಿನಿಯಂ ಆಕ್ಸೈಡ್ - Al₂O₃2SiO₂.2H₂O

 50. ಗ್ರೀನ್ ಕೇಸ್ - ಫೆರಿಕ್ ಸಲ್ಫೇಟ್ - Fe₂ (SO₄)